ಎವೆರಿ ಡಾಗ್ ಹ್ಯಾಸ ಏ ಡೇ ಅನ್ನೋ ಮಾತು ಇಲ್ಲಿ ಎಷ್ಟು ನಿಜವಾಗಿದೆ ನೋಡಿ. ಆದರೆ ಪಾಪ ಈ ನಾಯಿಗಳಿಗೆ ತುಂಬ ದಿನ ಈ ಸುಖ ಸಿಗಲಿಲ್ಲ, ಬೆಳಿಗ್ಗೆ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಮಿಕರು ಪಾಪದ ಪ್ರಾಣಿಗಳನ್ನು ಓಡಿಸಿ ಆ ಹಾಸಿಗೆಯನ್ನು ಹೊತ್ತು ಹೋದರು.
ಮೊನ್ನೆ ಮನೆಯಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ಲಿನಲ್ಲಿ ಬರುವ ಡೋಂಟ್ ಟೆಲ್ ಮೈ ಮದರ್ ಧಾರವಾಹಿ ನೋಡುತ್ತಾ ಕುಳಿತಿದ್ದ ನನಗೆ ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿಯುವ ಅವಕಾಶ ಒದಗಿ ಬಂತು. ಪಾಕಿಸ್ತಾನದ ಒಂದು ವಿಮಾನ ನಿಲ್ದಾಣದ ಹೊರಗೆ ಈ ರೀತಿ ಬರೆದಿದ್ದಾರಂತೆ.